Wikipedia

Search results

Friday, June 21, 2013

The kick start

ನಾನು  ಮತ್ತು ನೀವು
ನಮಸ್ಕಾರ ಮತ್ತು ಹಾಯ್,
ನಾನು ಈ ಬ್ಲಾಗ್ ಗೆ ಹೊಸಬ. ಬ್ಲಾಗ್ ಯಾಕೆ ಬರಿತಾರೆ ಹೇಗೆ ಬರಿತಾರೆ ಒಂದು ಗೊತ್ತಿಲ್ಲ. ನಾನು ಸುಮಾರು ಕಡೆ ಅಂತರ್ಜಾಲದಲ್ಲಿ ಹುಡುಕಿ- ತಡಕಿ, ಬಗೆದು- ಮಗೆದು ನೋಡಿದಾಗ, ಯಾರೋ ಒಬ್ಬ ಪುಣ್ಯಾತ್ಮ  ಇಪ್ಪತ್ತು ಕಾರಣಗಳನ್ನು ಕೊಟ್ಟಿದ್ದ. ಅದ್ರಲ್ಲಿ "ನಿಮಗೆ ಬರೆಯುವ ಹವ್ಯಾಸ ಇದ್ದರೆ, ನಿಮಗೆ ಸಹಾಯ ಮಾಡಬೇಕು ಅಂತ ಅನಿಸಿದರೆ, ನಿಮಗೆ ಬೋರ್ ಆದ್ರೆ, ನೀವು ಹಣ ಮಾಡಬೇಕು ಅಂತಿದ್ದರೆ, ನಿಮ್ಮ ಬುಸ್ಸಿನೆಸ್ಸ್ ವಿಸ್ತಾರ ಮಾಡಬೇಕು ಅಂತಿದ್ದರೆ, ನೀವು ಫೇಮಸ್ ಆಗ ಬೇಕು ಅಂತಿದ್ದರೆ, ನಿಮಗೆ ನಿಮ್ಮ ಆಲೋಚನೆ ಗಳು ಉಳ್ಳ ವ್ಯಕ್ತಿ ಸೇರಬೇಕು ಅಂತಿದ್ದರೆ, ನೀವು ಪುಸ್ತಕ ಬರೆಯ ಬೇಕು ಅಂತಿದ್ದರೆ, ನಿಮಗೆ ಪ್ರಪಂಚ ಬದಲಿಸುವ ಆಸೆ ಅಥವಾ ಛಲ ಇದ್ದರೆ , ನೀವು ವಿದ್ಯಾ ದಾನ ಮಾಡಬೇಕು ಅಂತ ಇದ್ದರೆ," ಮುಂತಾದ ಹೀಗೆ ಇಪ್ಪತ್ತು ಕಾರಣಗಳು ಇವೆ. ಈ ಕಾರಣಗಳನ್ನೂ ಕೊಟ್ಟಿರುವ ಮಹಾನುಭಾವನ ಹೆಸರು ಜಾನ್, ಈತನ ಬ್ಲಾಗ್ ವಿಳಾಸ ಇಲ್ಲಿದೆ ನೀವು ಓದಬಹುದು http://john.do/why-blog/ ಅಥವಾ ನೀವು ಗೂಗಲ್ ನಲ್ಲಿ 20 reasons to blog ಅಂತ ಕುಟ್ಟಿದರು ನಿಮಗೆ ಸಿಗುತ್ತದೆ.
ನನಗೆ ಈ ಫೇಮಸ್ ಆಗಬೇಕು, ಹಣ ಮಾಡಬೇಕು, ಅಥವಾ ಬೋರ್ ಆಗಿದ್ದೀನಿ ಅನ್ನೋ ಯಾವ ಕಾರಣಕ್ಕೂ ಬ್ಲಾಗ್ ಬರೀಬೇಕು ಅಂತ ಅನ್ನಿಸಲಿಲ್ಲ. ಬರೆಯೋ ಹವ್ಯಸನು ಇಲ್ಲ. ಆದ್ರೆ ಬರೀಬೇಕು ಅಂತ ಭಾರಿ ಹುಚ್ಚು, ತಲೆ ಒಳಗೆ ಸಿಕ್ಕಾಪಟ್ಟೆ ಕತೆಗಳು ಇದ್ದಾವೆ, ಅದನ್ನ ಬರೀಬೇಕು, ಅದನ್ನು ನೀವು ಓದಬೇಕು, ಈ ಬರವಣಿಗೆ ಮೂಲಕ ಒಂದು ಕ್ರಾಂತಿ ಶುರು ಮಾಡಬೇಕು, ನನ್ನ ಭಾರತ ದೇಶವನ್ನು ಬದಲಿಸ ಬೇಕು, ನನ್ನ ಭಾರತೀಯ ಭಂದು ಮಿತ್ರರ ಜಡತ್ವ ವನ್ನು ದೂರಗೊಳಿಸಿ ಅವರ ಯೋಚನೆ ಗಳನ್ನೂ ಹೊಸ ದಿಕ್ಕಿನ ಕಡೆ ತಿರುಗಿಸಬೇಕು, ಕಷ್ಟದಲ್ಲಿ ಇದ್ದವರ ಸೇವೆ ಮಾಡಬೇಕು, ನಾನು ಬದುಕಿರುವ ವರೆಗೂ ನನ್ನ ಜನರನ್ನು ಸುಖವಾಗಿ ಇಡಬೇಕು,ಸಂತೋಷದಿಂದ ನೋಡಬೇಕು ಮತ್ತು ನನ್ನ ಕತೆಗಳನ್ನು ಜೊತೆಗೆ ಬೇರೆಯವನ್ನು ಕೂಡ ಸಿನಿಮಾ ಗಳನ್ನಾಗಿ ಮಾಡಬೇಕು ಅನ್ನೋ ಒಂದು ಸಣ್ಣ ಗಟ್ಟಿಯಾದ ನಂಬಿಕೆ ಇಂದ ನಾನು ಬ್ಲಾಗಿಸುವುದಕ್ಕೆ ಶುರುವಿಟಿದ್ದೇನೆ ಮತ್ತು ಅದಕ್ಕೆ ಮಹಾಕ್ರಾಂತಿ ಅನ್ನೋ ಹೆಸರನ್ನು ಕೊಟಿದ್ದೇನೆ. ಆದರು........  ದುಡ್ಡು ಬರುತ್ತೆ ಅಂದ್ರೆ ಬೇಡ ಅನ್ನೋಕೆ ಆಗುತ್ತಾ...?? ಅದು ಈ ಕಾಲದಲ್ಲಿ...!! ಬರಲಿ ಬಂದ್ರೆ ಅದನ್ನು ನಮ್ಮ ಸಮಾಜಕ್ಕೋಸ್ಕರ ಬಳಸೋಣ, ಅಲ್ವೇ...!!
ಆದರೆ ಸಮಸ್ಯೆ ಏನು ಅಂತಿರ, ನಿಜವಾಗ್ಲೂ ನಂಗೆ ಬರೆಯೋಕೆ ಬರೋದಿಲ್ಲ ಕಣ್ರೀ, ಬರೆಯೋಕು ಬರಲ್ಲ, ಬರೆಯೋ ಹವ್ಯಾಸನು ಇಲ್ಲ. ನನ್ನ ದೊಡ್ಡ ತೊಂದರೆ ಸೋಮಾರಿತನ ನಾನಂತು ಸಕತ್ತು ಸೋಮಾರಿ, ನನಗೆ ಹಾಗೆ ಅನ್ನಿಸುತ್ತೆ, ಯಾವ ವಿಷಯದಲ್ಲೂ ಅಲ್ಲ, ಕೇವಲ ಓದೋ  ಮತ್ತು ಬರೆಯೋ ವಿಷಯದಲ್ಲಿ ಮಾತ್ರ. ಕಥೆ ಪುಸ್ತಕ ಕೊಡಿ ದಿನ- ರಾತ್ರಿ ಅನ್ನದೇನೆ ಕುಳಿತು ಊದಿ ಬಿಡ್ತೀನಿ ಆದ್ರೆ, ಬರೆಯೋಕೆ ಮತ್ತು ಸಬ್ಜೆಕ್ಟ್ ಓದೋಕೆ ಹೇಳಬೇಡಿ ಪ್ರಾಣ ಹೋದಾಗೆ ಅಗುತ್ತೆ. ಇರಲಿ, ಕಷ್ಟಪಟ್ಟು  ಬರೆಯೋಕೆ ಕುಳಿತೆ ಅಂದರೆ ಒಂದು ಸಮಸ್ಯೆ , ತಲೆ ಒಳಗೆ ವಿಷಯ ಇರುತ್ತೆ ಸರಿ ಕುಳಿತ ತಕ್ಷಣ ಎಲ್ಲ ಖಾಲಿ ಖಾಲಿ ತಲೆ ಅಂತ ಅನ್ನಿ ಸುತ್ತೆ. ಅಕ್ಷರಗಳು ಪದಗಳು ಎಲ್ಲ ಹೆದರಿ ಹೆದರಿ ಓಡಿ ಹೋದ ಹಾಗೆ  ಅನ್ನಿಸುತ್ತೆ. ಅದಕ್ಕೆ ಈಗ ಮನಸ್ಸು ಗಟ್ಟಿ ಮಾಡ್ಕೊಳ್ಳಿ, ಯಾಕೆ ಅಂತಿರ, ನನ್ನ ಈ ಬರೆಯೋ ಆಸೆ ಮತ್ತು ಪ್ರಯತ್ನಕ್ಕೆ ಮೊದಲು ಬಲಿ ಅಗುತ್ತಿರೊ ಪ್ರಾಣಿಗಳು ಅಂದ್ರೆ ನೀವೇ...!!
ಗಾಬರಿ ಆಗಬೇಡಿ, ತಮಾಷೆ ಮಾಡಿದೆ. :) ನೀವು ಇದನ್ನು ಅಂದ್ರೆ ನನ್ನ ಬರವಣಿಗೆ ಗಳನ್ನೂ ಓದಿ, ಅದರಲ್ಲಿನ ನನ್ನ ಸರಿ-ತಪ್ಪುಗಳನ್ನು ಹೇಳಿದರೆ ಮುಂದೆ ನನಗೆ ತುಂಬಾ ಸಹಾಯ ಮಡಿದ ಹಾಗೆ ಆಗುತ್ತದೆ. ನಿಮ್ಮ ಯಾವುದೇ ರೀತಿಯ ಅಭಿಪ್ರಾಯ, ಅನಿಸಿಕೆಗಳಿದ್ದರು ಸ್ವಾಗತ.
ನನ್ನ ಪ್ರಯತ್ನದಿಂದ ಎಲ್ಲರಿಗು ಉತ್ತರಿಸುತ್ತೇನೆ. ಕ್ರಾಂತಿ ವೀರರಾದ ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಆಜಾದ್ ರನ್ನು ನೆನೆಯುತ್ತ ನನ್ನ ಈ ಮೊದಲ ಬರವಣಿಗೆಯನ್ನು ಮುಗಿಸುತ್ತಿದ್ದೇನೆ. 
ಇಂತಿ ನಿಮ್ಮ ಭಾರತಾಂಬೆಯ ಪುತ್ರ
ದೀಪಕ್ ರಾಮ ಚಂದ್ರ
 

4 comments:

  1. chenage bardedea maga nenna e prayathnake nanna sampurna bembala ede nennage subhawagali kano

    ReplyDelete
    Replies
    1. Thanks maga.. ninna support heege irli. :) Heege odutta iru, sari tappu na heltiru ayta.. dhanyavada

      Delete
  2. en antha boring illa...ninna 1st blog, yavdadru subject mele bari avaga ninna hane baraha gothaguthe ;-)

    ReplyDelete
    Replies
    1. Thanks maga. baritini, time beku.. shuru madiddini

      Delete