Wikipedia

Search results

Thursday, October 27, 2016

Screw it , Let's do it: Richard Branson

Screw it., Just read it.

Good lessons from Richie's life. But I read his book Loosing My Virginity so i felt that  this book is a summary of LMV.
For Beginners, I am sure this inspires.

Screw it, Just read it.

Tuesday, October 11, 2016

The Godfather_ Kannada

ಕಾದಂಬರಿ ಓದುವ ಅಭ್ಯಾಸ ಕಡಿಮೆ ಇದ್ದ ನನಗೆ, ತುಂಬ ದಿನಗಳ ನಂತರ ಒಂದು ಒಳ್ಳೇ ಕಥೆ. ಡಾನ್ ಗಳ ಬಗೆಗಿನ ವೈಶಿಷ್ಟ್ಯ ವನ್ನು ಬಿಚ್ಚಿ ಇಡುವ ಈ ಪುಸ್ತಕ ಡಾನ್ ಚಿನ್ನ ಮಾದಿ ರೆಡ್ಡಿಯ family ಕಥೆ ಯನ್ನು ಅದ್ಭುತವಾಗಿ ಹೇಳುತ್ತದೆ.
ಒಂದೆ ಮಾತಿನಲ್ಲಿ ಹೇಳಬೇಕೆಂದರೆ _ ಕಲ್ಪನಾ ಲೋಕದಲ್ಲಿ ಸಮಯ ಕೊಲ್ಲಲು ಒಂದು ಒಳ್ಳೇ ಪುಸ್ತಕ_.

Sunday, May 1, 2016

ವೀರಪ್ಪನ ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು

ವೀರಪ್ಪನ್ ಎಂದರೆ ಮೊದಲು ನೆನಪಿಗೆ ಬರುವುದು ಭಯ ಹುಟ್ಟಿಸುವಂತಹ, ಕೆನ್ನೆ ತುಂಬ ಹರಡಿದ ‘ಕಪ್ಪು ಮೀಸೆ’, ನಂತರ ಬರುವುದು ದಂತಚೋರ’ ನರಹಂತಕ’ ಎಂಬ ಹವಾರು ಬಿರುದುಗಳು. ಆ ದಿನ ನಾನು ನನ್ನ ದಿಗ್ರಿ ಕಾಲೇಜ್ಗೆ ಹೋಗಿದ್ದೆ, ನನ್ನ ಗುರುಗಳು ಹೇಳಿದ್ರು ನಾಳೆ ಕೃಪಾಕರ-ಸೇನಾನಿ ಬರುತ್ತಿದ್ದಾರೆ ನೀನು ಬಾ ಒಂದು ಸಣ್ಣ ಟಾಕ್ ಇರುತ್ತೆ. ತಕ್ಷಣ ನನ್ನ ತಲೆಯಲ್ಲಿ ಏನೋ ಮಿಂಚಿದಂತಾಗಿ ನಾನು ಹೇಳಿದೆ “ಸಾರ್ ನಾನು ನೆನ್ನೆ ಅವರು ಬರೆದಿರುವಂತ ‘ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು’ ಎನ್ನೊ ಪುಸ್ತಕ ತಂದಿದ್ದೀನಿ ಸಾ’.
ಹೌದಾ! ಹಾಗಾದ್ರೆ ನಾಳೆ ತಗೊಂಡು ಬಾ. ಅವರಿಗು ಖುಷಿಯಾಗುತ್ತೆ.
ಹೊಂ ಸಾರ್. ಎಂದು ಹಾಗೆ ಮಾತು ಹರಟುತ್ತಾ ಕುಳಿತೆ.
ಮಾರನೇ ದಿನ ಕಚೇರಿಯಲ್ಲಿದ್ದ ನಾನು ಕೆಲಸದ ಮದ್ಯೆ ಬಿಡುವು ಮಾಡಿಕೊಂಡು ಬಂದಾಗ ಕಾರ್ಯಕ್ರಮ ಕೊನೆಯ ಹಂತ ತಲುಪಿತ್ತು. ಛೆ! ಇನ್ನೂ ಸ್ವಲ್ಪ ಬೇಗ ಬರಬೇಕಿತ್ತು’ ಎಂದುಕೊಳ್ಳುತ್ತಾ ಮುಂದಿನ ಸಾಲಿನಲ್ಲೆ ಖಾಲಿ ಇದ್ದ ಕುರ್ಚಿಯಲ್ಲಿ ಕುಳಿತೆ. ವಂದನಾರ್ಪಣೆ ಹೇಳಲು ವೇದಿಕೆ ಏರಿ ಸಿದ್ದರಾಗಿದ್ದ ಗುರುಗಳು ನನ್ನ ನೋಡಿ ಕೈಯಲ್ಲಿ ಹಿಡಿದಿದ್ದ ಮೈಕ್ ತೊರಿಸುತ್ತ ‘ಬಂದು ಮಾತಾಡ್ತಿಯಾ?’ ಎಂದು ಕಣ್ಣ ಸನ್ನೆಯಲ್ಲಿ ಕೇಳಿದರು. ಸಿಕ್ಕಿದ್ದೇ ಚಾನ್ಸು ಎನ್ನುತ್ತಾ ಹೊಂ ಎಂದು ತಲೆ ಅಲುಗಾಡಿಸಿದೆ.
ಈ ಕಾಲೇಜಿನ ಹಳೇ ವಿದ್ಯಾರ್ಥಿಯಾದ ದೀಪಕ್ ರವರು ಕೃಪಾಕರ-ಸೇನಾನಿ ಯವರನ್ನು ಕುರಿತು ಮಾತನಾಡಲು ಇಚ್ಚಿಸುತ್ತಾರೆ’ ಎಂದು ಹೇಳುತ್ತಾ ಕರೆದು ನನಗೆ ಮೈಕ್ ಕೊಟ್ಟರು. ಕೈಯಲ್ಲಿ ಕೃಪಾಕರ-ಸೇನಾನಿ ಯವರು ಬರೆದ ಪುಸ್ತಕ ಹಿಡಿದು ಬೀಗುತ್ತಿದ್ದ ನಾನು, ಅಲ್ಲಿ ನೆರೆದಿರುವ ಎಲ್ಲರಿಗು ನಮಸ್ಕಾರ ಮಾಡುತ್ತಾ ಪುಸ್ತಕವನ್ನು ಎತ್ತಿ ಹಿಡಿದು “ಈ ಪುಸ್ತಕ ನೋಡಿದ್ದೀರ?” ಎಂದು ಕೇಳುತ್ತಾ, ಪುಸ್ತಕವನ್ನು ಹೊಗಳುತ್ತಾ, ಎಲ್ಲಾರು ಓದಬೇಕಾದ ಪುಸ್ತಕ ಎಂದು ಮಾತು ಮುಗಿಸಿದೆ. ಸಿನೆಮಾ ಟ್ರೈಲರ್ ನೋಡಿ ಸಿನೆಮಾ ಹೇಳಿದ ಹಾಗೆ, ನಾನು ಆ ಪುಸ್ತಕದಲ್ಲಿ ಓದಿದ ಎರಡು ಹಾಳೆಗೆ ಇಡೀ ಪುಸ್ತ್ಕಾನೆ ವರ್ಣಿಸಿದ್ದೆ!!!
ಪುಸ್ತಕದ ಬಗ್ಗೆ ಎರಡು ಮಾತನ್ನಾಡಿದ ನಾನು, ಖುಷಿಯಿಂದ ಕೃಪಾಕರ-ಸೇನಾನಿಯವರ ಹಸ್ತಾಕ್ಷರ ಪಡೆಯಲು ಪುಸ್ತಕವನ್ನು ಅವರ ಮುಂದೆ ಹಿಡಿದೆ. ಕೃಪಾಕರಅವರು ಮುಗುಳ್ನಗೆ ಬೀರುತ್ತಾ ಸಹಿ ಹಾಕಿದರು, ಆದರೆ ಸೇನಾನಿಯವರು ಒಲ್ಲದ ಮನಸಿನಿಂದ ಸಹಿ ಮಾಡಿದರು ಎನ್ನಿಸಿತು. ಇರಲಿ ಪರವಾಗಿಲ್ಲ, ಸಹಿ ಹಾಕಿಸಿ ಕೊಂಡೆನಲ್ಲ ಅಸ್ಟು ಸಾಕು ಎಂದುಕೊಳ್ಳುತ್ತಾ ಮುಂದಿನಾ ಸಾಲಿನಲ್ಲಿ ಗುರುಗಳ ಪಕ್ಕ ಕುಳಿತೆ.
ಕಾರ್ಯಕ್ರಮ ಮುಗಿದ ನಂತರ, ಗುರುಗಳು ಕಿವಿಯಲ್ಲಿ ಪಿಸುಗುಟ್ಟುತ್ತಾ ಹೇಳಿದರು “ಹಾ! ಯು ಆರ್ ವೆರಿ ಲಕ್ಕಿ, ಅವರು ಯಾರಿಗು ಹೀಗೆ ಸಹಿ ಮಾಡೋದಿಲವಂತೆ ನಿನಗೆ ಮಾಡಿಕೊಟ್ಟಿದ್ದಾರೆ”. ನನನಗೆ ಆಶ್ಚರ್ಯವೋ ಆಶ್ಚರ್ಯ!! ಮತ್ತೆ ಹೇಳಿದರು “ಇವತ್ತು ಕಾರ್ಯಕ್ರಮಕ್ಕೆ ಬಂದಿದ್ದು ನಮ್ಮ ಅದೃಷ್ಟ, ಎಲ್ಲೂ ಹೀಗೆ ಬರೋದಿಲ್ಲವಂತೆ, ಮೀಡಿಯದವರನ್ನು ಹತ್ತಿರ ಸೆರಿಸೋದಿಲ್ಲವಂತೆ”. ಇದನ್ನೆಲ್ಲ ಕೇಳಿದ ನನಗೆ, ಇದೇನಪ್ಪ ವಿಚಿತ್ರ ಎನ್ನಿಸಿತು, ಅಲ್ಲಿ ಹೆಚ್ಚು ಯೋಚಿಸಲು ಅವಕಾಶವಿರಲಿಲ್ಲ. ಬೇರೆ ಮಾತುಗಳಲ್ಲಿ ಆ ವಿಷಯ ಮರೆತೇಹೋಯಿತು.
ಬೆಳಗ್ಗೆ ಹೇಳಿದ ಸುಳ್ಳನ್ನು ಸತ್ಯ ಮಾಡಲು ರಾತ್ರಿ ಮನೆಗೆ ಬಮದು ಪುಸ್ತಕ ಓದಲು ಶುರುಮಾಡಿದೆ. ಓದುತ್ತಾ-ಓದುತ್ತಾ ಸಮಯ ಸರಿದಿದ್ದು ತಿಳಿಯಲೇ ಇಲ್ಲಾ, ಓದುವುದನ್ನು ನಿಲ್ಲಿಸಲೂ ಆಗಲಿಲ್ಲ. ಒಲ್ಲದ ಮನಸ್ಸಿನಿಂದ ಪುಸ್ತಕವನ್ನು ಮುಚ್ಚಿ ನಿದ್ದೆಗೆ ಜಾರಿದೆ. ಕೆಲಸದ ನಡುವೆ ಆ ಚಿಕ್ಕ ಪುಸ್ತಕವನ್ನು ಮುಗಿಸಲು ಬರೋಬ್ಬರಿ ಎರಡು ದಿನ ತೆಗೆದುಕೊಂಡೆ.
ಪುಸ್ತಕದ ಪ್ರತಿ ಹಾಳೆಯಲ್ಲು, ಪ್ರತಿ ಅಧ್ಯಾಯದಲ್ಲು ಸನ್ನಿವೇಶಗಳನ್ನು ವಿವರಿಸಿರುವ ರೀತಿ ನಿಜವಾಗಲು ಓದುಗರಿಗೆ ಖುಷಿಯನ್ನು ನೀಡುತ್ತರೆ. ವೀರಪ್ಪನ್ ಅವರನ್ನು ಅಪಹರಿಸಿದ ಸಂದರ್ಭದಲ್ಲು ಅವರು ತೋರಿಸಿರುವ ಸಮಯ ಪ್ರಜ್ಞೆ ಮತ್ತು ಹಾಸ್ಯ ಪ್ರಜ್ಞೆ ಶ್ಲಾಘನೀಯ. ಅದನ್ನು ವಿವರಿಸುವ ಮತ್ತು ವ್ಯಂಗ್ಯಮಾಡುವ ರೀತಿಯು ಓದುಗರನ್ನು ನಗಿಸದೆ ಇರಲಾರದು. ನನ್ನು ತುಂಬಾ ಯೋಚನೆಗೆ ತಳ್ಳಿದ ಸಂಗತಿಯೆಂದರೆ “ ನಾನು ಕೇಳಿದ್ದ, ತಿಳಿದಿದ್ದ, ಸಿನೆಮಾ-ಟಿ.ವಿ ಗಳಲ್ಲಿ ನೋಡಿದ್ದ ವೀರಪ್ಪ ಈ ಪುಸ್ತಕದಲ್ಲಿ ಇಲ್ಲ. ಈತನಿಗೆ ಕೆಟ್ಟ ಮೇಲೆ ಬುದ್ದಿ ಬಂತೋ ಅಥವ ಒಳ್ಳೆಯದನ್ನು ಮಾಡಲು ಹೋಗಿ ಕೆಟ್ಟವನಾದನೋ ಆ ದೇವರಿಗೆ ಗೊತ್ತು! ಪರಿಸ್ಥಿತಿಯ ಕೈ-ಗೊಂಬೆಯಾಗಿದ್ದ ಇವನಿಗೆ, ಹಲವು ಕಸಸುಗಳು, ಪರಿಸರದ ಬಗ್ಗೆ ಇದ್ದ ಕಾಳಜಿ, ತನ್ನ ಜನರ ಬಗ್ಗೆ ಇದ್ದ ಪ್ರೀತಿ ನಮ್ಮನ್ನು ಚಿಂತೆ ಹಚ್ಚುತ್ತವೆ. ನಮ್ಮ ನಾಗರೀಕ ಜನರ ಮತ್ತು ರಾಜಕೀಯದವರ ಅನಾಗರೀಕ ವರ್ತನೆ ಬೆರಗು ಗೊಳಿಸುತ್ತವೆ. ಇದನ್ನೆಲ್ಲಾ ಇಡಿಯಾಗಿ ಅನುಭವಿಸುತ್ತಾ ಓದುತ್ತಿದ್ದ ನನಗೆ, ಕೃಪಾಕರ-ಸೇನಾನಿ ಯವರು ಮೀಡಿಯಾದವರಿಂದ ದೋರ ಉಳಿದಿದ್ದು ಯಾಕಂತ ಕೊನೇ ಅಧ್ಯಾಯದಲ್ಲಿ ತಿಳಿಯಿತು. ಕೊನೆಗೆ ಅವರು ಮಾಡಿದ್ದರಲ್ಲಿ ಅರ್ಥಯಿದೆ ಎಂದನಿಸಿತು!!!

Deepak

Monday, February 22, 2016

Tuesday, February 16, 2016

Indian political systems

Very Very Very IMPORTANT
Step To A Great Revulation........

ಭಾರತದ ಶಾಸನವು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದೆಯೇ ???

ಹಾಗಾದರೆ ಇದನ್ನು ಓದಿ;

1. ಒಬ್ಬ ವ್ಯಕ್ತಿಯು ಒಂದು ಚುನಾವಣೆಗೆ  ಎರಡು ಕ್ಷೇತ್ರದಲ್ಲಿ ಓಟಿಗೆ ನಿಲ್ಲಬಹುದು

ಆದರೆ
ಒಬ್ಬ ಪ್ರಜೆ ಒಂದೇ ದಿನದಲ್ಲಿ ಎರಡು ಪಕ್ಷಕ್ಕೆ ಮತ ಹಾಕುವಂತಿಲ್ಲ

2. ನೀವು ಜೈಲಲ್ಲಿದ್ದರೆ ಮತ ಹಾಕುವಂತಿಲ್ಲ

ಆದರೆ
ಅಭ್ಯರ್ಥಿ ಜೈಲಲ್ಲಿದ್ದು ಚುನಾವಣೆ ಎದುರಿಸಬಹುದು

3. ನೀವು ಯಾವಾಗಲಾದರೂ ಒಂದು ಸಲ ಜೈಲಿಗೆ ಹೋದರೆ ಮತ್ತೆ ಜೀವನ ಪರ್ಯಂತ ಸರಕಾರದ ನೌಕರಿ ಸಿಗೋದಿಲ್ಲ
ಆದರೆ ರಾಜಕಾರಣಿಗಳು ಎಷ್ಟೇ ಬಲಾತ್ಕಾರ ಕೊಲೆಗಳನ್ನು ಮಾಡಿದ್ದರೂ ಸಹ ಅವರು ಬಯಸಿದ ಹಾಗೆ ಪ್ರಧಾನಿ, ರಾಷ್ಟ್ರಪತಿ ಏನೂ ಆಗಬಹುದು

4. ಬ್ಯಾಂಕಲ್ಲಿ ನೌಕರಿ ಬೇಕಾದಲ್ಲಿ ನಾವು ಡಿಗ್ರಿ ಪಡೆದಿರಬೇಕು

ಆದರೆ
ರಾಜಕಾರಣಿಗಳು ಹಣಕಾಸಿನ ಸಚಿವರಾಗಲು ಯಾವ ಡಿಗ್ರಿಯ ಅವಶ್ಯಕತೆ ಇಲ್ಲ

5. ನಮಗೆ ಸೇನೆಯಲ್ಲಿ ಕೆಲಸ ಸಿಗಲು ಡಿಗ್ರಿ ಜೊತೆ 10km ಓಡಿ ತೋರಿಸಬೇಕು

ಆದರೆ
ರಾಜಕಾರಣಿಗಳು ಅವಿದ್ಯಾವಂತರಾದರೂ ದುಢೂತಿ ದೇಹವಿದ್ದರೂ ಸೇನಾ ಸಚಿವರು ಆಗಬಹುದು

6. ಅಲ್ಲದೆ ಯಾರ ಇಡೀ ವಂಶವು ಅನಕ್ಷರಸ್ಥರ ಕುಟುಂಬ ಆಗಿರುವದೋ ಆ ವಂಶದ ವ್ಯಕ್ತಿಯು ಶಿಕ್ಷಣ ಸಚಿವರಾಗಬಹುದು

8. ಮತ್ತು ಯಾವ ರಾಜಕಾರಣಿಯ ಮೇಲೆ ಸಾವಿರಾರು ಕೇಸುಗಳಿದ್ದರೂ ಆ ವ್ಯಕ್ತಿಯು ಪೋಲೀಸರಿಗೆ ಚೀಫ್ ಅಂದರೆ ಗೃಹ ಮಂತ್ರಿ ಆಗಬಹುದು

ನಿಮಗೆ ಈ ಪದ್ಧತಿಯನ್ನು ಬದಲಾಯಿಸುವ ಬಯಕೆ ಇದ್ದಲ್ಲಿ, ಅಂದರೆ ಪ್ರಜೆ ಮತ್ತು ರಾಜಕಾರಣಿಗಳಿಗೆ ಒಂದೇ ನಿಯಮ ಬೇಕೆಂದು ಬಯಸಿದಲ್ಲಿ ಇದನ್ನು
ಎಲ್ಲರೊಂದಿಗೂ ಶೇರ್ ಮಾಡಿ

ಶ್ರೀ ದೇಶಪಾಂಡೆ
ಸರಕಾರಿ ವಕೀಲರು
ಮುಂಬಯಿ ಉಚ್ಛ ನ್ಯಾಯಾಲಯ ಮುಂಬಯಿ .........

ದಯವಿಟ್ಟು ಶೇರ್ ಮಾಡಿ........
Source .... internet